ಕನ್ನಡಿ ಎಂಬ ಕನಸುಗಳ ಮುನ್ನಡಿ

ಕನ್ನಡಿ ಕನಸುಗಳು ಅದ್ಯಮ ಚೇತನ.ಹೊಸ ಹುಟುಕಾಟಕ್ಕೆ ದಾಪುಗಾಲು ಹಾಕಲು ಹೊರಟಿದೆ.ಮಾಧ್ಯಮ ವಿಸ್ತಾರ ಜಗುಲಿಯಲ್ಲಿ ಹೊಸ ಕನಸುಗಳ ಬೆನ್ನೇೋರಿ

ಹೊರಟಿದೆ.ಮೊದಲ ಪ್ರಯತ್ನವಾಗಿ 6X3 ಎಂಬ ಡ್ಯಾಕುಮೆಂಟರಿ ಮೂಲಕ

ಮಾಧ್ಯಮದ ಜಗುಲಿ ಏರಿದೆ.ಬದುಕು ಸಾಗಬೇಕಾದರೆ,ಸಾವು ಸಂಭಿಸಲೇಬೇಕು.ಇದು

ಸಾಕ್ಷ್ಯಚಿತ್ರ ತಿರುಳು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ

9844187426

ಸಾಗುವುದು

Leave a Comment

Filed under Uncategorized

dream of dust

ನೋಡಲೇ ಬೇಕಾದ ಚಿತ್ರ.ಬಂಗಾರ ಅಗೆದು ಬಡವಾದ ಜೀವಿಗಳ ಕಥೆಯೇ
ಚಿತ್ರದ ಸಾರಾಂಶ

Leave a Comment

Filed under Uncategorized

rain

Leave a Comment

Filed under Uncategorized

Leave a Comment

Filed under Uncategorized

ಉಯ್ಯೊ …ಉಯ್ಯೋ ಮಳೆರಾಯ..

ಮುಂಗಾರು ಮಳೆ ಕೈಕೊಟ್ಟಿತು.ಬಿತ್ತಿದ ಎಳ್ಳು ಒಡಲೊಳಗೆ ಹುದಗಿ ಬೆಂದ ಹೋಗಿತ್ತು.ದಿನ್ನೆ ಹೊಲಗಳಲ್ಲಿ ಅಷಾಢದ ಗಾಳಿ ಬಿಕೋ ಎಂದು ಬಿಸುತ್ತಿತ್ತು..ನರಪಿಳ್ಳೆ ಕೂಡ ದಿನ್ನೆ ಹೊಲಗಳ ಕಡೆ ಸುಳಿದಿರಲಿಲ್ಲ.

ಮುಂಗಾರು ಪೂರ್ವ ಮಳೆಗೆ ಒಂದ್ಸರಿ ಹದ ಕಂಡಿದ್ದ ಭೂತಾಯಿ ಮಳೆ ಸ್ವಗತಕ್ಕಾಗಿ ಕಣ್ಣ್ ತೆರೆದು ಹಂಬಲಿಸುತ್ತಿತ್ತು……ದನ,ಕರುಗಳು ಬೂತಮ್ಮನ ಬೆಟ್ಟದ ತಂಗಾಡಿ ಸೊಪ್ಪು ತಿಂದು ಪೇರಲವಗೊಂಡಿದ್ದವು.ಸೀಮೆ ಹಸುಗಳಿಗೆ ಮೇವು ಇಲ್ಲದೆ ಹಾಲು ಉತ್ಪಾದನೆ ಕುಂಠಿತಗೊಂಡು,ಕೈಖರ್ಚಿಗೆ ಕಾಸಿಲ್ಲದೆ ಹೆಂಗಸರ ಎಲೆಯಡಿಕೆ ಚೀಲ ಬಿಕೋ ಎನ್ನುತ್ತಿತ್ತು.ಗಂಡಸರ ಸೋಮಾರಿತನ ಹುಣಿಸಿಕೋಟೆಯಲ್ಲಿ ಮಾಮೂಲಿಯಾಗಿತ್ತು.ರಾಗಿ,ಅವರೇ,ಅಲಸಂದೆ,ಹುಚ್ಚೇಳ್ಳು ಇಲ್ಲದೆ ರೈತಾಪಿ ಮಹಿಳೆಯರು ಹೇಗಪ್ಪ ಬದುಕು ಎನ್ನೋ ಚಿಂತಯಲ್ಲಿಯಿದ್ದರು.ಬೋರ್ ವೆಲ್ ನೀರು ಪಾತಳಕ್ಕೆ ಇಳಿದು,ಗಟ್ಟಿಪುರ ಮನೆಯವರು,ಸೀತಾರಾಮಣ್ಣೋರ ಮನೆಯೋರು ವ್ಯವಸಾಯ ನೀನು ಸಾಯ ಎನ್ನೋ ಸ್ಥಿತಿಗೆ ಬಂದಿದ್ದರು…..

ಈ ಮಧ್ಯದಾಗ,ಟಮೋಟೆಗೆ ಬೆಲೆ ಇಲ್ಲದೆ,ರಸ್ತೆಗೆ ಬಂದಿದ್ದು…..ಅಷಾಢದ ದೀಪಗಳ ಹಬ್ಬ .ಸಾಲ ಸೋಲ ಮಾಡಿ ಕೆಜಿಗಟ್ಟಲೇ ಬಾಡು ತಿನ್ನೋದೆ ಹಬ್ಬದ ವಿಶೇಷ.ಕೋಲಾರ ಸೀಮ್ಯಾಗ ಹುಣಿಸಿಕೋಟೆಯಲ್ಲಿ ದೀಪದ ಹಬ್ಬ ಎಂದರೆ,ಅಷ್ಟೋಂದು ಫೇಮಸ್.ತಿನ್ನಕ್ಕೆ ಹಿಟ್ಟು ಇಲ್ಲದಿದ್ದರೂ ಇದೊಂದು ಒಣಪ್ರತಿಷ್ಟೆ.ಕೆ.ಜಿ ಗಟ್ಟಲೇ ಬಾಡನದ್ದೆ ಕಾರುಬಾರು.ನೆಂಟರಿಷ್ಟಿರು ಶ್ಯಾನೆ ಆದಮ್ಯಾಕ್ಕ ಪೆಂಡಾಲ್  ಅದೂ ಇದೂ ಹೀಂಗೆ ಏನೇನು ವ್ಯವಸ್ಥೆಗಳು ದುಬಾರಿ ಸಂಕಷ್ಟ.ರೈತರ ಜೇಬು ಖಾಲಿ ಮಾಡಿತ್ತು.

ಕೇಡುಗಾಲ ಬಂದರೂ,ಈ ಊರಾಗ ಬಡ ತಿನ್ನೋಕೆ ಬರ  ಅನ್ನೋದು ಕೆಂಪನಹಳ್ಳಿ,ಟೇಕಲ್, ಉಳ್ಳೇರಹಳ್ಳಿ ಜನರ ವಾಡಿಕೆ ಮಾತು.ಶ್ರಾವಣ ಶುರುವಾದರೂ,ಹನಿ ನೀರು ಉದರಲೇ ಇಲ್ಲ.ತ್ವಾರಣಹಳ್ಳಿ ಕೆರೆ,ಗಟ್ಟಿಪುರ ಕೆರೆಗಳು ತುಂಬಿ ವರ್ಷಗಳೇ ಕಳೆದಿದ್ದವು.ಬರಗಾಲ ಬಂತು ಎಂದರೆ,ಕರೆಯಲ್ಲಿ ಸಿಗೋ ಮೀನು ಸೊಪ್ಪು,ಗೊಡ್ಡಿಗಡ್ಡೆ ಉಪ್ಪನೀರು ಎಸರು ತಿಂದು,ತಿಂದು ಬಾಯಿ ರುಚಿ ಕೆಟ್ಟಿ ಹೋಗಿರೋದು.ಪಾಪ…..ಹೆಂಗಸರು ತಾನೇ ಏನು ಮಾಡೋಕ ಅತದಾ ಹೇಳಮ್ಮೊ ….ಹೀಂಗೆ ಬರಗಾಲದ ಸಾವಿರ ಕಷ್ಟಗಳನ್ನ ಹೊಗೆಸೊಪ್ಪು ನಮಲುತ್ತ ಹೆಂಗಸರು ಬೂತಮ್ಮನ ಬೆಟ್ಟ ದಿಟ್ಟಿಸಿ ಮೋಡಣ್ಣನನ್ನು ಬೈಕಂತ್ತಿದ್ದರು.

ಉಯ್ಯೋ ಉಯ್ಯೋ ಮಳೆರಾಯ… ಪದವನ್ನು ಹೇಳಿಕೊಂಡು ಹೈಕಳು ಕೆರಯಲ್ಲಿ ಮಳೆರಾಯನ ಪ್ರಾರ್ಥನೆ ಮಾಡಿದ್ದರು.ಮನೆ ಮನೆ ಬಾಗಿಲಿಗಿ ಹೋಗಿ ಭಿಕ್ಷೆಯೆತ್ತಿದ್ದ ದವಸ ಧ್ಯಾನ್ಯವನ್ನು ಹೈಕಳು ಕೆರೆಯಲ್ಲಿ ಬೇಯಿಸಿ ಮಳೆಗಾಗಿ ಕೈಮುಗಿದಿದ್ದರು.

ಆದರೂ ಮಳೆ ಬರಲಿಲ್ಲ.ಕೆರೆ ಕೋಡಿ ಜನರ ಕಷ್ಟ ಹೇಳುತ್ತಿತ್ತು…..

ಯಾತಕ್ಕೆ ಮಳೆ ಹೋಯಿತೋ ತಮ್ಮ .ಯಾತಕ್ಕೆ ಮಳೆ ಹೋಯಿತೋ …ಕಾರಣಗಳು ನೂರಾರು:ಕೂಲಿ ನಾಲಿ ಮಾಡೋರಿಗೆ ಉಪ್ಪುಗಂಜಿಯೇ ಮೃಷ್ಟಾನವಾಯಿತು.ಗಣೇಶನ ಹಬ್ಬ,ಮಾರನಾಮಿ,ದೀಪಾವಳಿ ಕ್ಯಾಲೆಂಡರ್ ಹಬ್ಬವಾಯಿತು.ಮನಸ್ಸುಗಳಿಗೆ ಹಬ್ಬವಾಗಲಿಲ್ಲ.ಹೊಸ ದ್ಯಾವರ ಬಂಡೆ ಮೇಲೆ ಕುಯ್ಯುತ್ತಿದ್ದ ಕುರಿ,ಹಂದಿಗಳ ರಕ್ತದ ಕಲೆಗಳು ಮಾಸಿದ್ದವು.

ವರ್ಷ ಕಳೆದಿತ್ತು.ಬೀಕರ ಬರಗಾಲದ ಕಹಿನೆನಪುಗಳು ಹಿಂಡಿ ಹಿಪ್ಪೆ ಮಾಡಿತ್ತು.

ಮಾರನೇ ವರ್ಷ…. ಫಲಸು ಆಗವಷ್ಟು ಮಳೆ.ಆದರೆ,ಹೊತ್ತಾರೆ ತೊಳಕೊಳ್ಳಕ್ಕೂ ಕೆರೆ,ಕುಂಟೆಗಳಲ್ಲಿ ನೀರ ಸಿಗದಷ್ಟು ಕಡಿಮೆ ಪ್ರಮಾಣ.ಈ ವರ್ಷನೂ ಇದೇ ಸ್ಥಿತಿ ಮುಂದುವರಿಯುವ ಮನ್ಸೂಚನೆ.
ಆದರೂ ಏನಂತೆ ಕಲ್ಲುಗಣಿಗಾರಿಕೆಯೇ ಹುಣಿಸೀಕೋಟೆ ಜನರಿಗೆ ಅನ್ನ ಇಕ್ಕುತ್ತಿದೆ.ಸಂಪನ್ಮೂಲ ಮುಗಿದು ಹೋದರೆ,ಬದುಕು ರಾಮ ಗೋವಿಂದ ಅನ್ನೋದು ಗೊತ್ತಿದೆ.ಬೇಜಾನ್ ಟ್ರೈನ್ ಸೌಲಭ್ಯ.ಕೆಜಿಎಫ್, ಬಂಗಾರಪೇಟೆ,ಕುಪ್ಪಂ,ಟೇಕಲ್ ಸೀಮೆಗಳಿಂದ ದಿನನಿತ್ಯ ಸಾವಿರಾರು ಜನರು ಬೆಂಗಳೂರಿಗೆ ಬತ್ತಾರೆ.ಒಂದೂವರೆ ಗಂಟೆಯಲ್ಲಿ ಬೆಂಗಳೂರು ಸೇರಬಹುದಾಗಿರುವುದರಿಂದ ಬೇಕಾದ ಕೆಲಸ ಮಾಡ್ತಾರೆ.ಬರಗಾಲ ಬಂದರೆ ಏನು, ಕೇಡುಗಾಲ ಬಂದರೂ ಏನು .. ಜನರು ಬದಲಾವಣೆಗೆ ಒಗ್ಗಿಕೊಂಡಿದ್ದಾರೆ..

ಗುಂಡುತೋಪುಗಳು ಮಳೆ ಮೋಡವನ್ನ ತರಲ್ಲ.ಕೋಲಾರ ಬೆಟ್ಟ ಮ್ಯಾಗ ಮಳೆ ಬರಲ್ಲ.ಅಕಾಶ ನೋಡಿ,ವರ್ತಮಾನ ಹೇಳುವ ಓಬ್ಬಟ್ಟಿ ಸಂಜೀವಪ್ಪ ಮಾತು ಯಾಕೋ ದಿಟವಾಗುತ್ತಿದೆ.

ಆದರೂ ಮಳೆ ಬರಲಿಲ್ಲ….ಮನಸ್ಸು ಮಾತ್ರ ಪ್ರಾರ್ಥನೆ ಮಾಡುತ್ತಲೇ ಇದೆ.

Leave a Comment

Filed under Uncategorized

ಮಳೆ…ಹುಡುಗಿ

ಸೂರು ಸೂರಿನ ದೀಪ ಆಕಾಶದ ಚುಕ್ಕಿ …
ಮಾಸೋಗೋ ಹೊತ್ತು ಆಯಿತು..
ಉರಿದೈತೆ ಆ ಮನೆಯ ಗುಡಿಸಲ ದೀಪ….
ಹೀಗೆ ..ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಅವರ ಜೀತ ಬಾಲಕನ ಸಾಕ್ಷರತೆ  ಹಾಡಿನ ಸಾಲನ್ನು ಹೊಳೆಸಾಲ ಏರಿದ ಧ್ವ ನಿಯಲ್ಲಿ ಹಾಡುತ್ತಿದ್ದ.ಕೇರಳದ ತ್ರಿಶೂರ್ ಜಿಲ್ಲೆಯ ಪುಟ್ಟಹಳ್ಳಿಯ ತುಂಬೆಲ್ಲಾ ಕನ್ನಡದ ಗಮಲು ಹರಡಿತ್ತು.ಆ ಹಳ್ಳಿಯಲ್ಲಿ ವಿವಿಧ ಸಂಘಟನೆಗಳು ಆಯೋಜಿಸಿದ್ದ ಜಲ ಮತ್ತು ಜಾತಿ ಕುರಿತು ಒಂದು ವಾರದ ಓರಿಯಂಟೆಷನ್ ಕಾರ್ಯಕ್ರಮಕ್ಕಾಗಿ ಬೆಂಗಳೂರಿನಿಂದ ಹೋಗಿದ್ದ ವಿವಿಧ ಸಂಘಟನೆಗಳ ಹುಡುಗ,ಹುಡುಗಿಯರು ಬಿಡಾರ ಹೂಡಿದ್ದರು.
ಇಂಡಿಯಾದ ಜಲ ರಾಜಕಾರಣ ಮತ್ತು ಜಾತಿ ವ್ಯವಸ್ಥೆ ಕುರಿತ ಗಂಭೀರ ವಿಷಯಗಳ ಚರ್ಚೆ ಬಿಡುವಿನಲ್ಲಿ ಬೆಂಗಳೂರಿನ ಹೊಳೆಸಾಲ ಕೋರಸ್್ ನೊಂದಿಗೆ ಹೋರಾಟದ ಹಾಡುಗಳು ಮೂಲಕ ಎಲ್ಲರ ಗಮನ ಸೆಳೆದಿದ್ದ,ಭಾಷೆ ಗೊತ್ತಿಲ್ಲದವರೂ,ಹಾಡಿನ ಗದ್ದು,ಇಂಪಿಗೆ ತಲೆದೂಗುತ್ತಿದ್ದರು.
ಜಲ ಕುರಿತ ವಿಚಾರ ಸಂಕಿರಣ ನಡೆಯುತ್ತಿತ್ತ ಅಲ್ಲಿ ದಿನವಡೀ ಮಳೆ….ಆಗ ಕರ್ನಾಟಕದಲ್ಲಿ ಭೀಕರ ಬರಗಾಲ ಸ್ಥಿತಿ…..ರೈತರು ಗೂಳೆ ಹೊರಟ್ಟಿದ್ದರು.ಸರ್ಕಾರದಲ್ಲಿ ಮೋಡ ಬಿತ್ತನೆ ಬಗ್ಗೆ ಚರ್ಚೆ ನಡೆಯುತ್ತಿತ್ತು.
<ತಮಿಳುನಾಡಿನ ಮಧುರೈ,ಬೆಂಗಳೂರು ಕಡೆಯಿಂದ ಬಂದಿದ್ದ ಕಾಲೇಜು ಹುಡುಗ,ಹುಡುಗಿಯರ ದೊಡ್ಡ ದಂಡೇ ಸೇರಿತ್ತು.ಹೊಸ ವಿಚಾರಗಳಿಗೆ ತೆರದುಕೊಳ್ಳುತ್ತಿದ್ದ ಹುಡುಗ ಹುಡುಗಿಯರಿಗೆ ಕೇರಳದ ಮೋಹಕ ಪರಿಸರ ಮನ ಸೆಳೆದಿತ್ತು.
ಮಂಟೇಸ್ವಾಮಿ…..ಮಲೆಮಹದೇಶ್ವರನ ಹಾಡುಗಳು ಓಘವೇ ಅಲ್ಲಿ ನಲೆದಾಡಿತ್ತು.
ಹೊಳೆಸಾಲನ ಕಂಠಸಿರಿಯಲ್ಲಿ ಹಾಡುಗಳು ಹೊರಹೊಮ್ಮುತ್ತಿದ್ದರೆ,ವಿಚಾರ ಸಂಕಿರಣಕ್ಕೆ ಬಂದಿದ್ದ ಶ್ರಿಶೂರ್ ನ ಮಲೆಯಾಳಿ ಹುಡುಗಿಯೊಬ್ಬಳು ಭಾಷೆ ಗೊತ್ತಿಲ್ಲದಿದ್ದರೂ ಕಣ್ಣ್ ಮುಚ್ಚಿ ಅಲಿಸುತ್ತಿದ್ಧಳು………..
ಮಲೆಯಾಳಿ ಪೆಣ್ಣಿನ ಹೆಸರು ಮರೆದಿತಿದೆ.ಅವಳು ಮೀನುಗಾರರ ಬದುಕಿನ ಬಗ್ಗೆ ಕಟ್ಟಿದ ಹಾಡುಗಳ ಕಣಜವಾಗಿದ್ಧಳು.
ಬಾಗೇಪಲ್ಲಿ,ಗುಡಿಬಂಡೆ ಸೀಮೆಯಲ್ಲಿ ನೀರಿನ ಅಭಾವ ಬಿಂಬಿಸುವ ತೆಲುಗಿನ ಸಾಕ್ಷ್ಯಚಿತ್ರ ತೊಲಿ ಚಿನಕ (ಮೊದಲ ಹನಿ)ಎಂಬ ನೀರಿನ ಸಾಂಸ್ಕೃತಿಕ ಡ್ಯಾಕ್ಯುಮೆಂಟರಿ ಬಗ್ಗೆ ಸಾಕಷ್ಚು ಚರ್ಚೆಗಳು ನಡೆಯುತ್ತಿದ್ದವು.
ಕರ್ನಾಟಕದ ಜಲ ವಿವಾದಗಳು,ಬರಗಾಲದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮಲೆಯಾಳಿ ಹುಡಗಿ ಬೆಂಗಳೂರಿನಿಂದ ಹೋಗಿದ್ದ ಟೀಂ ಜೊತೆ ಬೆರೆಯತ್ತಿದ್ದಳು……
ಒಂದು ದಿನ ಆ ಊರಿನಲ್ಲಿಯಿದ್ದ ಡ್ಯಾಂ ನೋಡಲು ನಾವೆಲ್ಲ ಹೋಗಿದ್ದೇವು.ಅವಳು ನಮ್ಮ ಜೊತೆಯಾದಳು.ಮುಂಗಾರು ಪೂರ್ವ ಜೋರು ಮಳೆ ಅವರಿಸಿತ್ತು.ದಟ್ಟ ಕಣಿವೆ ಮಧ್ಯೆ ಇರುವ ಡ್ಯಾಂ ನ ಸುಂದರ ಪರಿಸರ ಮಲೆಯಾಳಿ ಹುಡುಗಿಯಗಿಂತಲುೂ ತುಂಬಾ ಚೆಲುವು.ಧಾರಾಕಾರ ಮಳೆ ನಮ್ಮನ್ನು ತೊಯ್ದು ತೊಪ್ಪೆಯಾಗಿಸಿತ್ತು.ಮಳೆಯಾಳಿ ಹುಡುಗಿಯ ಮನಸ್ಸು ಹೊಳೆಸಾಲನ ಹೃದಯವನ್ನು ತಟ್ಟಿತ್ತು.ಮಳೆಯ ಸಿಂಚನದಲ್ಲಿ ಇಬ್ಬರ ಕಣ್ಣಗಳು ಕಲೆದು ಮುಂಗಾರು ಹಾಡನ್ನು ಹೇಳುತ್ತಿದ್ದವು.ಹೊಳೆಸಾಲ ಡ್ಯಾಂನ ನಿರ್ಮಲ ನೀರನ್ನು ಕಂಡು ಪ್ರೇಮ ಕಾವ್ಯ ಕಟ್ಟುತ್ತಿದ್ದ.p>

ವಿಚಾರ ಸಂಕಿರಣದಲ್ಲಿ ಹೊಳೆಸಾಲ ಹಾಡುತ್ತಿದ್ದ ಕಟ್ಟುತ್ತೇವೆ ನಾವು ಕಟ್ಟುತ್ತೇವೆ ಹೊಸ ನಾಡ ಕಟ್ಟುತ್ತೇವೆ..ಹಾಡನ್ನೇ ತಿರುಚಿ ಕಟ್ಟುತ್ತೇವೆ ನಾವು ಕಟ್ಟುತ್ತೇವೆ ನಮ್ಮ ಹುಡುಗನಿಗೆ ಹೊಸ ಹುಡುಗಿಯನ್ನು ಕಟ್ಟುತ್ವೇವೆ ಎಂದು ಹುಡುಗರು ಕಿಚಾಯಿಸುತ್ತಿದ್ದರು.
ಅಗ್ನಿ ಪತ್ರಿಕೆಯ ಮಂಜುನಾಥ ಅದ್ದೆ,ಸಂವಾದ ಬಳಗದ ಮೂರ್ತಿ ನೀರಿನ ರಾಜಕಾರಣದ ಬಗ್ಗೆ ಬಹುವಾಗಿ ಮಾತನಾಡಿದರು.ವಿಚಾರ ಸಂಕಿರಣ ಆ ಊರಿನ ಚರ್ಚ್ ವೊಂದರಲ್ಲಿ ನಡೆಯುತ್ತಿತ್ತು.ಚಹ ತೋಟದ ಮಧ್ಯೆ ಚರ್ಚ್ ವಿರಾಜಮಾನವಾಗಿ ಕಂಗೊಳಿಸುತ್ತಿತ್ತು.ದೊಡ್ಡಕ್ಕಿ ಅನ್ನ,ಮೀನು ಸಾರು,ಪಲ್ಯ ಸಕತ್ ಆಗಿ ಉಡಾಯಿಸುತ್ತಿದ್ದೆವು.
ಈ ಮಧ್ಯೆ,ಮಧುರೈನ ಕಾಲೇಜ್ ವೊಂದರ ಪಂಜೆ ಹುಡುಗರು ಲಂಗ ದಾವಣಿ ಹುಡುಗಿಯರ ಪಟಾಲಂ ಹೊಳೆಸಾಲನ ಪ್ರೇಮ ಪುರಾಣವನ್ನು ತಮಿಳಿನಲ್ಲಿ ಲಾವಣಿ ಕಟ್ಟಿ ಹಾಡಲಾರಂಭಿಸಿದ್ದರು.
ಹಗಲು ರಾತ್ರಿ ಬಿಡದೆ ಕಾಡುತ್ತಿದ್ದ ಮಳೆ,ಚರ್ಚಿನ ಬೆಚ್ಚನೆ ರಾತ್ರಿಗಳು,ಕನಸಿನಲ್ಲಿ ಬರುತ್ತಿದ್ದ ಮಲೆಯಾಳಿ ಹುಡುಗಿಯರು,ಮೀನಿನ ಸಾರಿಗೆ ಗುಡ್ ಬೈ ಹೇಳುವ ಹೊತ್ತಾಯಿತು.
ಎಂಟು ದಿನಗಳು ಕಳೆದಿದ್ದವು.
ಅಂದು ಬೆಳಗ್ಗೆ ಗಂಟು ಮೂಟೆ ಕಟ್ಟಬೇಕಾಯಿತು.ಗುಡ್ ಬೈ ಹೇಳುವ ಸಮಯ,ಆಟೋಗ್ರಾಫ್ ಬರೆಯಿಸಿಕೊಳ್ಳುತ್ತಿದ್ದ ತಮಿಳು,ಮಲೆಯಾಳಿ ಹುಡುಗ,ಹುಡುಗಿಯರು.
ಜೋರು ಮಳೆ……ಮಲೆಯಾಳಿ ಹುಡುಗಿ ಮನಸ್ಸಿನಲ್ಲಿ ಅದುಮಿಕೊಂಡಿದ್ದ ಭಾವನೆಗಳು ಮಳೆ ಹನಿಯಾಗಿ ಉದರುತ್ತಿದ್ದವು..ಚರ್ಚಿನ ತಾರಾಸಿ ಮೇಲೆ ನಿಂತು ಮಳೆಗೆ ಮುಖವೊಡ್ಡಿ ಅಳುತ್ತಿದ್ದಳು………
ಹೊಳೆಸಾಲ ಕಣ್್ ಂಚಿನಲ್ಲಿ ನೀರು ತುಂಬಿಕೊಂಡು ಪ್ಲೇನ್ ಕಿಸ್ ಕೊಟ್ಟ.ಬಿಳಿ ಹಣೆ ತಿಲಕದ ಕಂಕಳ ಸುಂದರಿ.. ಮಳೆಗಿಂತಲೂ ಚೋರಾಗಿ ಅಳುತ್ತಿದ್ದಳು…
ಭಾರದ ಹೃದಯಗಳೊಂದಿಗೆ ಕೊನೆಗೂ ಗುಡ್ ಬೈ ಹೇಳಿ ಬೆಂಗಳೂರಿಗೆ ಬರಲು ಕನ್ಯಾಕುಮಾರಿ ಎಕ್ಸ್ ಪ್ರೆಸ್ ಹತ್ತಿದೇವು.
ಹೀಗೆ ಮೊನ್ನೆ ಹೊಳೆಸಾಲ ಕೆಪಿಎಸ್ ಸಿ ಕಚೇರಿ ಬಳಿ ಸಿಕ್ಕಾಗ ಮಲೆಯಾಳಿ ಹುಡುಗಿ ಬಗ್ಗೆ ಕಿಚಾಯಿಸಿದೆ.ಅವನು ಸುಮ್ನೇ ಇರು ಗುರೂ..ಎಂದು ಮುಗಳ್ನಕ್ಕು ಕಾರು ಹತ್ತಿದ್ದ.
*************************0**********************************

Leave a Comment

Filed under Uncategorized

ಮೊಬೈಲ್ ಗೆಳತಿ

ಮೆಜೆಸ್ಟಿಕ್ ನ ಬಾರ್ ವೊಂದರಲ್ಲಿ ಕುಳಿತು ಹರಡುತ್ತಿದ್ದ ವಿವೇಕ ನಿಗೆ ಓಂದು ಫೋನ್ ಕಾಲ್ ಬಂತು.ಬಾಟಲಿಗಳ ಸದ್ದು,ಕೂಲ್ ಬೀಯರ್ ಅವನ ಮಾತಿಗೆ ಸಾಥ್ ಕೊಡುತ್ತಿತ್ತು.ಅವನು ಮಾತನಾಡುತ್ತಲೇ ಇದ್ದ.ಸುಜ್ಞಾನ,ಅಲ್ಲು,ಪಿಂಚಿ,ಕೃಷ್ಣ,ಹರಿ ಕುಲ್ ಆಗಿ ಬೀಯರ್ ಎರುಸುತ್ತಿದ್ದರು.ವಿವೇಕನ ಮಾತು ಮುಂದುವರಿದಿತ್ತು.ಏನಂತೆ ಮಗ,ಅವಳ ಕಥೆ ಎಂದು ಗಳೆಯರ ಛೇಡಿಕೆ ಮಧ್ಯೆ ವಿವೇಕ ಗಹಗಹಿಸಿ ನಗುತ್ತಾ ಫುಲ್ ಸ್ಕೋಫ್ ಕೊಡುತ್ತಿದ್ದ.
ಅವಳು ವಿವೇಕನಿಗೆ ಫಿಜಿಯಲ್ಲಿ ಗೆಳತಿ.ಏನದು ಬಾಟಲ್ ಸದ್ದು ಅಂತ ಅವಳು ಕೇಳುತ್ತಲೇ ಇದ್ಧಳು,ಏನು ಇಲ್ಲೇ ಕಣೇ..ಸುಜ್ಞಾನ ನಾಳೆ ಬೆಳಗ್ಗೆ ಹೈದರಾಬಾದ್ ಗೆ ಹೋಗುತ್ತಿದ್ದಾನೆ ಇನ್ನೂ ಸಿಗುವುದು ಮೂರು ತಿಂಗಳು ಆಗಬಹುದು ಆದಕ್ಕೆ ಫ್ರೆಂಡ್ಸ್ ಎಲ್ಲಾ ಸೇರಿ ಸಣ್ಣ ಟ್ರಿಟ್ ಕೊಡುಸುತ್ತಿದ್ದೇವೆ.ಏಹ್…..ಸುಜ್ಞಾನ ಎಂದರೆ,ಅದೇ ಸೆಂಟ್ರಲ್ ಕಾಲೇಜ್ ಕ್ಯಾಂಪಸ್ಸ್ ನ ಫ್ಯಾಷನ್ ಡಿಸೈನ್ ಡಿಫಾರ್ಟ್ ಮೆಂಟ್ ಅಲ್ಲವ್ವ.ಊ ಕಣೇ ಅವನೇ.ಸುಜ್ಞಾನ್ ಬಗ್ಗೆ ಫಿಜಿಯಲ್ಲಿಯಿದ್ದಾಗ ತುಂಬಾ ಕೇಳಿದ್ದೀನಿ ಕಣೋ,ಅವನು ಹುಟ್ಟು ಹೋರಾಟಗಾರ ಅಂತೆ.ಏನು ಇಲ್ಲಾ ಮಣ್ಣು..ಅವನೊಬ್ಬ ಫ್ಯಾಷನ್ಿ ಹೋರಾಟಗಾರ ಎಂದು ವಿವೇಕ್ ಗುಂಡಾ ಹಾಕುತ್ತಿದ್ದ ಗೆಳಯರತ್ತ ನೋಡಿ ಕೇಕೆ ಹಾಕಿದ.ಫ್ಲೀಸ್ ಫೋನ್ ಕೊಡೋ ಒಂದ್ಸಲ ಮಾತನಾಡುತ್ತೇನೆ.ಸುಮ್ಮೀರು ಆ ನನ್ಮಗ ,ದೊಡ್ಡ ಬ್ಲೇಡ್ ಕಂಪನಿ.ಅವನತ್ರ ಏನ್ ಮಾತನಾಡ್ತೀಯ ಎಂದು ವಿವೇಕ ಗದರಿಸಿದ.
ಅವಳು ಗೋಗರಿದಳು.ವಿವೇಕ್ ಫೋನ್ ಕೊಟ್ಟ.ಬಿಯರ್,ಸಿಗರೇಟಿು ಹೊಗೆಯ ಘಮತ್ತಿನಲ್ಲಿಯಿದ್ದ ಗೆಳೆಯರಿಗೆ ಇವರ ಗೊಡವೇ ಬೇಕಿರಲಿಲ್ಲ.
ಸುಜ್ಞಾನನ ಮಾದಕ ಮಾತಿಗೆ ಅವಳು ಸಖತ್ ಟೆಮ್ ಟ್ ಆಗಿ,ಇಬ್ಬರು ಕುಯ್ತಾನೇ ಇದ್ದರು.ಪರಿಚಯ,ಕೆಲಸ,ಫ್ರಂಡ್ಸ್ ಹೀಗೆ ಅವನ ಮಾತಿನ ಲಹರಿ ಸಾಗಿತ್ತು.ಸುಜ್ಞಾನನಿಗೆ ಬಿಯರ್ ಗಿಂತ ಅವಳ ಮಾತಿನ ನಶೆ ಕಿಕ್ ಕೊಟ್ಟಿತ್ತು.ಮೊಬೈಲ್ ನಂಬರ್ ಪರಸ್ಪರ ವಿನಮಯವಾಯಿತು,ತಪ್ಪದೆ ಹೈದರಾಬಾದ್ ಗೆ ಹೋದ ಮೇಲೆ ಫೋನ್ ಟಚ್ ನಲ್ಲಿ ಇರಬೇಕೆಂದು ತಾಕೀತು ಮಾಡಿದಳು.ಅಬ್ಬಾ….. ಸುಜ್ಞಾನ ಪುಲ್ ಮೂಡ್ ನಲ್ಲಿ ರೋಮಾಂಚಿತನಾದ.ಅವಳಿಗೂ ಆ ರಾತ್ರಿ ನಿದ್ದೆ ಹತ್ತಲಿಲ್ಲ.
ಸರಿ…..ಫೋನ್ ನಲ್ಲೇ ಲವ್ ಶುರವಾಯಿತು.ಸುಜ್ಞಾನ್ ನಿಗೆ ಹೈದರಾಬಾದ್ ನ ಬಿಸಿ ರಾತ್ರಿಗಳು ನಿದ್ದೆ ಕೊಡಲಿಲ್ಲ.ಅವಳನ್ನ ನೋಡಬೇಕೆಂದು ಕಾತರಿಸಿದ.ಮದುವೆಯಾದ,ಮಕ್ಕಳು ಆಯಿತು..ಹೀಗೆಲ್ಲಾ ಕನಸು ಕಂಡ.ಪ್ರಣಯದಲ್ಲಿ ಬೆಂದು ಹೋದ ಸುಜ್ಞಾನ್ ರಜೆ ಹಾಕಿ ಬೆಂಗಳೂರಿಗೆ ಬಂದ.ಜಯನಗರದಲ್ಲಿ ಟೆಲಿಫೋನ್ ಗೆಳತಿ ರೇಖಾಳನ್ನು ಭೇಟಿಯಾದ.
ಲವ್ ಮುಂದುವರಿಯಿತು..ಇಬ್ಬರ ಕಣ್ ನೋಟದಲ್ಲಿ ಪ್ರೀತಿ ತುಂಬಿದರೂ,ಆದು ವ್ಯಕ್ತವಾಗಲಿಲ್ಲ.ಫೋನ್ ಇದಕ್ಕೆ ವೇದಿಕೆ ಎಂದು ನಿಶ್ಚಯಿಸಿ ಇಬ್ಬರು ಸುಮ್ಮಾನಾದರು.ಫೋನಿನ ಮಾತೇ ಇಬ್ಬರಿಗೂ ಹಾಯ್ ಎನಿಸಿತು.
ತಾಸುಗಟ್ಟಲೆ ಫೋನ್ ನಲ್ಲಿ ಮಾತಿನ ಓಘ ಹರಿಯುತ್ತಿತ್ತು.ಸುಜ್ಞಾನ ನ ಸಂಬಳದ ಅರ್ಥ ದುಡ್ಡು ಕರೆನ್ಸಿಗೆ ಖಾಲಿಯಾಗುತ್ತಿತ್ತು.ಮೆಚ್ಚುಕೊಂಡಿದ್ದೀನಿ ಕಣೇ (ಣೋ)..ಎಂಬ ಶಬ್ದ ಬಿಟ್ಟು ಭಾವನೆಗಳು,ಬದುಕು,ಎಲ್ಲಾ …ವಿನಮಯವಾಗಿತ್ತು.ಇಬ್ಬರಿಗೂ ಹಠಕ್ಕೆ ಬಿದ್ದವರಂತೆ 123 ಹೇಳುವುದಕ್ಕೆ ಕಾಯುತ್ತಲೇ ಇದ್ದರು.
ನಿನ್ನ ನೋಡಲೆಂದು ಮಾತನಾಡಲೆಂದು….
ಹೇಳಲು ಒಂಥಾರಾಥರಾ….
ಕೇಳೊಲೊಥರಾಥರಾ…..
ಪ್ರೀತಿ ಗುಮ್ಮ ತುಟಿ ಬಿಚ್ಚಲಿಲ್ಲ.ಅವನಿಗೂ ಸಾಕಾಯಿತು.ಅವಳಿಗೂ ಸಾಕಾಯಿತು.ಕಲ್ಲು ಹೃದಯ ಎಂದು ಹೀಯಾಳಿಸಿದಳು,ಪುಕ್ಕಲ ಎಂದು ಗೇಲಿ ಮಾಡಿದಳು.ಕಾದು ಶಬರಿಯಾದಳು…..ಸುಜ್ಞಾನ ಗೊಂದಲದಲ್ಲಿ ಸಿಲುಕಿ ಏನು ಹೇಳಲಾರದೆ,ಸುಮ್ಮಾನಾದ.ಅವಳು ಹಠ ಮುಂದುವರಿಸಿದಳು.ರೇಖಾಳಿಗೆ ಮನೆಯಲ್ಲಿ ಗಂಡು ನೋಡೋದಕ್ಕೆ ಶುರುವಾಯಿತು.ಸುಜ್ಞಾನ ಯಾಕೋ ಅವಳನ್ನ ದೂರ ಮಾಡೋದಕ್ಕೆ ಶುರುಮಾಡಿದ.ಈ ನಡುವೆ ಕೆಲಸ,ಕಮ್ಯುನಿಕೇಷನ್ ಗ್ಯಾಪ್ ನಿಂದ ಮತ್ತಷ್ಟು ಪರಿಸ್ಚಿತಿ ಬಿಗಾಡಾಯಿಸಿತು.
ರೇಖಾಗಳಿಗೆ ಮದುವೆ ಫಿಕ್ಸ್ ಆಯಿತು.ಬಂಡ ಧೈರ್ಯ ಮಾಡಿದ ಸುಜ್ಞಾನ ರೈಲು ಹೋದ ಮೇಲೆ ಟಿಕೇಟ್ ತಗೆದುಕೊಂಡ.ಪ್ರಪೊಸಲ್ ಮಾಡಿದ,ಆವಳು ಫುಲ್ ಉಲ್ಟಾ ಹೊಡೆದಳು…
ನಿನ್ನ ಮೇಲೆ ನನಗೆ ಇಷ್ಟವಿಲ್ಲ ಎಂದಳು……..ಎದೆಗೆ ಚುರಿ ಇರಿತ…..ಮನಸಿಗೆ ಖಿನ್ನತೆ ಆವರಿಸಿತು.ಭಗ್ನ ಪ್ಪೇಮಿಯಾದರೂ,ತಲೆಕೆಡಿಸಿಕೊಳ್ಳಲಿಲ್ಲ.
ರಜೆ ಮೇಲೆ ಸುಜ್ಞಾನ್ ಬೆಂಗಳೂರಿಗೆ ಬಂದ,ಮತ್ತದೇ ವಿವೇಕ್,ಅಲ್ಲು,ಪಿಂಚಿ,ಕೃಷ್ಣ,ಹರಿ ಪಟಾಲಂನೊಂದಿಗೆ ದೂರದ ಜೋಗಕ್ಕೆ ಹೋದ…ಬೇಸಿಗೆಯಲ್ಲಿ ನೀರು ಕಡಿಮೆಯಿದ್ದ ಗುಂಡಿಗೆ ಇಳಿದ ……ಕಣ್ಣೀರಿನ ಕಟ್ಟೆ ಹೊಡೆಯಿತು.ಬಂಡೆಕಲ್ಲು ಮೇಲೆ ನಿಂತು ಧುಮುಕ್ಕುವ ನೀರಿಗೆ ಮುಖವೊಡ್ಡಿದ………..
ಅಯಾಸದ ದೇಹ ಹೊತ್ತು ಗೆಳಯರೊಂದಿಗೆ ಬೆಂಗಳೂರು ಟ್ರೈನು ಹತ್ತಿದ……..
ಬೆಂಗಳೂರಿಗೆ ಬಂದ ಮೇಲೆ life is a railway station…love is a train.but friendship is a track======= ಎಂಬ ಗೆಳೆಯನೊಬ್ಬನ ಮಸೇಜ್ ನೋಡಿ ನಕ್ಕು ಸುಮ್ಮನಾದ.

1 Comment

Filed under Uncategorized

ಬೂತಮ್ಮನ ಬೆಟ್ಟ

ನ್ಯೂಜೆರ್ಸಿಯಿಂದ ಬಂದಿದ್ದ ಬಾಲ್ಯದ ಗೆಳಯನೊಬ್ಬ ಅಲ್ಲಿನ ಕೆಲ ಅನುಭವಗಳನ್ನ ಹಂಚಿಕೊಳ್ಳುತ್ತಾ,ಲೇವಡಿ ಮಾಡುತ್ತಾ ತನ್ನೂರಿನ ಬಾಲ್ಯದ ನೆನೆಪುಗಳಿಗೆ ಜಾರಿ ಹೋದ.ಅವನ ಹರಟೆಯಲ್ಲಿ ನನ್ನ ಬಾಲ್ಯದ ಅನುಭವಗಳು ಮಿಲನಗೊಂಡು ಬಾಲ್ಯದ ಸ್ಕೂಲ್ ನೆನಪಾಯಿತು.ನನ್ನೂರಿನ ಕಲ್ಲು ಬೆಂಡೆಗಳೇ ನನಗೆ ದಟ್ಟ ಕಾನನ.ಸಾಲು ಬೆಟ್ಟಗಳು ಹಿಮಾಲಯ ಗಿರಿ ಶಿಖರಗಳು.
ಬೆಟ್ಟಸಾಲುಗಳು ಡಿಸೆಂಬರ್ ನ ಹಿಮಕವಿದ ವಾತಾವರಣಕ್ಕೆ ಬೆಚ್ಚನೆ ಮಲಗಿದಂತೆ ಭಾಸವಾಗಿರುತ್ತಿದ್ದವು.
ಡಿಸೆಂಬರ್ ಚಳಿಯಲ್ಲಿ ಮೈ ನಡುಗುತ್ತ ಬೆಳ್ಳೆಂಬೆಳಗ್ಗೆ ಎದ್ದು ಕಣ್ಣುವುಚ್ಚುತ್ತಾ ಸೂಸು ಮಾಡೋದಕ್ಕೆ ಹಿತ್ತಲಿಗೆ ಹೋಗುತ್ತಿದ್ದೆ.ಮನೆಯಿಂದ ಫರ್ಲಾಂಗು ದೂರದಲ್ಲಿಯಿದ್ದ ಬೂತಮ್ಮನ ಬೆಟ್ಟ ಶ್ವೇತಾಬರಿಯಾಗಿ ಕಂಗೊಳಿಸುತ್ತಿದ್ದಳು.ಇದನ್ನು ಕಣ್ಣುಂಬಿಕೊಳ್ಳುವುದೇ ನನಗೆ ಸಕತ್ ಋಷಿ ವಿಚಾರವಾಗಿತ್ತು.ಬೆಳಗ್ಗೆನೇ ಮನೆ ಕೆಲಸ ಆರಂಭಿಸುವ ನನ್ನಮ್ಮ ಅಡುಗೆ ಮನೆಯಿಂದ ಇಣುಕಿ ಬೂತಮ್ಮನ ಬೆಟ್ಟದ ನೆತ್ತಿ ಮೇಲೆ ಸೂರ್ಯ ಬಂದಿದ್ದಾನೋ,ಇಲ್ಲವೊ ನೋಡುತ್ತಿದ್ದಳು.
ಶನಿವಾರವಾದರೆ ಮುಗಿತು ಕಥೆ,ತಣ್ಣೀರು ಸ್ನಾನ ಮಾಡಿ,ತುಳಿಸಿ ಪೂಜೆ,ಎಕ್ಕದ ಗಿಡಕ್ಕೆ ಪೂಜೆ ಮಾಡಿ,7ಗಂಟೆಗೆ ಹೊರಡುವ ಕೋಲಾರ ಬಸ್ ಹಿಡಿದು,ಮದಾಪುರ ಸ್ಕೂಲ್ ಹೋಗಬೇಕಿತ್ತು.
ಶನಿವಾರ ಸ್ಕೂಲ್ ಹೋಗುವುದು ಅಂದರೆ,ನನಗಂತೂ ರಣಹಿಂಸೆ.ಅಣ್ಣನ ಹತ್ತಿರ ಇಂಗ್ಲೀಷ್ ಪದ್ಯವನ್ನು ಕನ್ನಡಕ್ಕೆ ಬರೆಸ್ಕೊಂಡು ರಾತ್ರಿಯಲ್ಲಾ
ಕಂಠಪಾಠ ಮಾಡುತ್ತಿದೆ.ಇಂಗ್ಲೀಷ್ ಮೇಷ್ಟ್ರು ನಾರಾಯಣಸ್ವಾಮಿ ಅವರಿಗೆ ಶನಿವಾರದಂದು ಗಂಗಮ್ಮ ದೇವತೆ ಮೈಮೇಲೆ ಬರುತ್ತಿದ್ದಳು.ಇಂಗ್ಲೀಷ್ ಪದ್ಯ ಬರದಿದ್ದವರಿಗೆ ಹುಣಸೇ ಬಾರ್ಲು ಸೇವೆ ನೆನಸುಕ್ಕೊಂಡು ಡಿಸೆಂಬರ್ ಚಳಿಯಲ್ಲಿ ಕಂಬಳಿಯೊಳಗೆ ಸಣ್ಣಕ್ಕೆ ನಡುಗುತ್ತಿದೆ.
ಬೆಳಗ್ಗೆಯೇ ಅಲಸಂದೆ ಕಾಳುಸಾರು,ಹಿಟ್ಟು.ಅನ್ನ ಗಬಗಬನೆ ತಿನ್ನೊ ಹೊತ್ತಿಗೆ 7ಗಂಟೆ ಬಸ್ಸು ಕೆರೆ ಏರಿ ಕೆಳಗೆ ಹಾರನ್ ಮಾಡುತ್ತ ಊರೊಳಗೆ ಬರುವಷ್ಟರಲ್ಲಿ ಜೋಳಿಗೆ ಬಾಗ್ ನೇತ್ಕೊಂಡು
ಬಸ್ ಬಸ್ಚಾಂಡ್್ಗೆ ದೌಡಾಯಿಸುತ್ತಿದೆ.
ಇನ್ನೂ ನನ್ನ ಬಗ್ಗೆ ಅಮ್ಮನ ಗುಣಗಾನ ಕೇರಿಗೆ ಕೇಳಸೋದು.ನಮ್ಮ ಹೈದನು ಬೆಳಗ್ಗನೇ ತಣ್ಣೀರು ಸ್ನಾನ ಮಾಡಿಕೊಂಡು ತುಳಿಸಿ ಪೂಜೆ,ಬೂತಮ್ಮನ ಪೂಜೆ ಮಾಡಿ,
ಸ್ಕೂಲಿಗೆ ಹೊರಟವನೆ ಎಂದು ಓರಿಗೆ ಹೆಂಗಸರೊಂದಿಗೆ ಹರಡುತ್ತಿದ್ದಳು.
ಪಾಪಾ..ನನ್ನಮ್ಮನಿಗೆ ಏನು ಗೊತ್ತು.ಇಂಗ್ಳೀಷ್ ಪಂದ್ಯ ಬರದಿದ್ದಕ್ಕೆ ಈಗೆಲ್ಲಾ ಮಾಡುತ್ತಿದ್ದಾನೆ ಎಂದು.ಸ್ಕೂಲ್ ಬದಲಾಯಿಸಿದ್ದರಿಂದ ಹೊಸ ಸ್ನೇಹಿತರು,ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ನನಗೆ ಕಷ್ಟವೇ ಅಯಿತು.ಐದನೇ ಕ್ಸಾಸ್ ಲೀಡರ್ ಮೋಹನ್ ಫ್ರೆಂಡ್ ಶಿಫ್ ಸಂಪಾದಿಸುವುದು ದೊಡ್ಡ ಸವಾಲು ಆಗಿತ್ತು.ಅವನ ಹಿಂದೆ ಹುಡಗರ ದೊಡ್ಡ ಪಟಾಲಂ ಇರುತ್ತಿತ್ತು.ಇಂಗ್ಳೀಷ್ ಹರಿದು ಕುಡಿದಂತೆ ಆಡ್ತಾಯಿದ್ದ,ಅಮ್ಮ ಕೊಡುತ್ತಿದ್ದ ಪುಡಿಗಾಸಿನಲ್ಲಿ 50 ಪೈಸೆ ಪ್ರತಿ ಶನಿವಾರ ಮೋಹನ್ ಕೊಟ್ಟು,ಮೇಷ್ಟ್ರ ಬೆತ್ತದ ಸೇವೆ ತಪ್ಪಿಸಿಕೊಳ್ಳುತ್ತಿದೆ.ಸಾರ್ ಇವನಿಗೂ ಇಂಗ್ಲೀಷ್ ಪದ್ಯ ಬರುತ್ತೆ ಎಂದು ಮೋಹನ್ ದೊಡ್ಡ ಗಂಟಲಲ್ಲಿ ಹೇಳುತ್ತಿದ್ದ.
ಹೀಗೆ ಸಾಗಿತ್ತು ನನ್ನ ಶನಿವಾರದ ದಿನಚರಿ…….ಮೋಹನ್ ಸಖತ್ ಕ್ಸೋಸ್ ಆಗ್ಬಿಟ್ಟ.ನನ್ನ ಜೋಳಿಗೆ ಬಾಗ್ ನಲ್ಲಿ ಇರುತ್ತಿದ್ದ ಚಾಕೊಲೇಟ್,ಚಕ್ಕುಲಿ,ಪಪ್ಪರಮೆಂಟ್ ರುಚಿ ಅವನಿಗೂ ಹತ್ತಿಸಿದೆ.ಸುಡುಗಾಡು ಊರಲ್ಲಿ ಅಂಗಡಿಗಳೇ ಇರಲಿಲ್ಲ.ಹುಣಸೇ ಮರಗಳ ತೋಪಿನ ಮಧ್ಯೆ ಇದ್ದ ಮಾದಪುರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ,ಮೂರು ಜೋಡಿದಾರರ ಕುಟುಂಬಗಳು,ಕೆರೆ ಈ ಊರಿನ ಹೈಲೆಟ್ಸ್ ಎಂದು ಹೇಳಬಹುದು.
ಆದರೆ,ಮಾವಿನ ಕಾಯಿ,ಸಿಬೇಕಾಯಿ,ಕಾರೇಹಣ್ಣು ಅಯಾ ಕಾಲಮಾನದಲ್ಲಿ ಹೊಟ್ಟೆ ತುಂಬಿಸುತ್ತಿದ್ದವು.ಪಕ್ಕದ ಕರಡಿಗುರ್ತಿ,ಹುಲಿಗುಟ್ಟೆ,ಲಕ್ಷ್ನೀಸಾಗರಕ್ಕೆ ಆಗಸ್ಟ 15ರ ಸ್ವಾತಂತ್ರ್ಯ ದಿನದಂದು ಶಾಲಾ ಮಕ್ಕಳನ್ನು ಮೇಷ್ಟ್ರುಗಳು ಕರೆದೊಯ್ಯುತ್ತಿದ್ದರು.ಕಿರಿದಾದ ಬೆಟ್ಟಗುಡ್ಡಗಳ ನಡುವೆ ಇರುವ ಈ ಕುಗ್ರಾಮಗಳಿಗೆ ನಡೆದು,ಘೋಷಣೆ ಹಾಕಿ ಸಾಗುತ್ತಿದ್ದ ನಮಗೆ ಹೊಸ ಪುಳಕ ಹುಟ್ಟಿಸುತ್ತಿತ್ತು.ಆ ಊರಗಳಿಂದ ಬರುತ್ತಿದ್ದ ಗೆಳೆಯರ ಮನೆಗಳಲ್ಲಿ ಮಜ್ಜಿಗೆ,ಕಾಡು ಸೀತಾಫಲ ತಿನ್ನೋದು ಸಖತ್ ಮಜಾವಾಗಿರುತ್ತಿತ್ತು.
ಅಂಗೂ ಹೀಂಗೂ ಐದು ಪಾಸ್ ಆಗಿ ಆರನೇ ಕ್ಲಾಸಿಗ್ ಕಾಲಿಟ್ಟಿದೆ.ಅಷ್ಟೊತ್ತಿಗೆ ನಾನು ಸುಮಾರಾಗಿ ಓದೋ ಹುಡಗರ ಸಾಲಿಗೆ ಸೇರಿದ್ದೆ.ಮ್ಯಾಥ್ ಟೀಚರ್ ರಾಮಚಂದ್ರಗೌಡ,ಸಾವ್ರಕಾರ್ ಸೇಠು ಎಂಬ ಕಿರುನಾಟಕ ಮಾಡಿಸಿದರೂ ನಾನು ಸೇಠ್ ಪಾತ್ರ ಅಭಿನಯಿಸಿದೆ.ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ ಮಾತು ಆಗ್ಬಿಟ್ಟೆ.ಅದೇ,ಗುಂಗಿನಲ್ಲೇ ಆರು ಪಾಸು ಆಗಿ,ಏಳನೇ ಕ್ಸಾಸು ಮುಗಿಸಿ.ಎಂಟನೇ ತರಗತಿಗೆ ಪಕ್ಕದ ಊರಿಗೆ ಸೇರಿದ್ದೆ.ನನ್ನ ಮೊದಲಿನ ದಿನಚರಗಳು ಬದಲಾಗಿದ್ದವು.ಬೂತಮ್ಮನ ಬೆಟ್ಟಕ್ಕೆ ಜೆಲ್ಲಿ ಕ್ರೆಷರ್ ಬಂದು,ವಾತಾವರಣ ಹದೆಗೆಟ್ಟಿತ್ತು.ಮೊದಲಿನ ಹಾಗೆ ಬೂತಮ್ಮನ ಬೆಟ್ಟದ ಮೇಲೆ ಮಂಜು ಕವಿಯುತ್ತಿರಲಿಲ್ಲ.ತುಳಿಸಿ ಪೊಜೆ ಇರಲಿಲ್ಲ.ಇಂಗ್ಲೀಷ್ ಪದ್ಯದ ಕಂಠಪಾಠಕ್ಕಾಗಿ ತಡಕಾಡುತ್ತಿರಲಿಲ್ಲ.ಹೀಗೆ,ನೆನಪುಗಳು,ಬದುಕಿನ ಮಜಲುಗಳ ಬಗ್ಗೆ ಗೆಳಯನಿಗೆ ಹೇಳುತ್ತಲೇ ಇದ್ದೆ.ಕಣ್ಣ್ ಬಿಟ್ಟು ನೋಡಿದರೆ ಬೆಳಗಿನ ಕನಸು.ಮಾರ್ಜಿಂಗ್ ಶಿಷ್ಟ್ ಗೆ ಟೈಮ ಆಗಿತ್ತು.ತಡಬಡಾಯಿಸುತ್ತಾ ಅಫೀಸ್ಸಿಗೆ ಹೊರಟು ಬಂದೆ.

10 Comments

Filed under Uncategorized

Hello world!

Welcome to WordPress.com. This is your first post. Edit or delete it and start blogging!

1 Comment

Filed under Uncategorized