May 17, 2008...6:18 am
ಬೂತಮ್ಮನ ಬೆಟ್ಟ
ನ್ಯೂಜೆರ್ಸಿಯಿಂದ ಬಂದಿದ್ದ ಬಾಲ್ಯದ ಗೆಳಯನೊಬ್ಬ ಅಲ್ಲಿನ ಕೆಲ ಅನುಭವಗಳನ್ನ ಹಂಚಿಕೊಳ್ಳುತ್ತಾ,ಲೇವಡಿ ಮಾಡುತ್ತಾ ತನ್ನೂರಿನ ಬಾಲ್ಯದ ನೆನೆಪುಗಳಿಗೆ ಜಾರಿ ಹೋದ.ಅವನ ಹರಟೆಯಲ್ಲಿ ನನ್ನ ಬಾಲ್ಯದ ಅನುಭವಗಳು ಮಿಲನಗೊಂಡು ಬಾಲ್ಯದ ಸ್ಕೂಲ್ ನೆನಪಾಯಿತು.ನನ್ನೂರಿನ ಕಲ್ಲು ಬೆಂಡೆಗಳೇ ನನಗೆ ದಟ್ಟ ಕಾನನ.ಸಾಲು ಬೆಟ್ಟಗಳು ಹಿಮಾಲಯ ಗಿರಿ ಶಿಖರಗಳು.
ಬೆಟ್ಟಸಾಲುಗಳು ಡಿಸೆಂಬರ್ ನ ಹಿಮಕವಿದ ವಾತಾವರಣಕ್ಕೆ ಬೆಚ್ಚನೆ ಮಲಗಿದಂತೆ ಭಾಸವಾಗಿರುತ್ತಿದ್ದವು.
ಡಿಸೆಂಬರ್ ಚಳಿಯಲ್ಲಿ ಮೈ ನಡುಗುತ್ತ ಬೆಳ್ಳೆಂಬೆಳಗ್ಗೆ ಎದ್ದು ಕಣ್ಣುವುಚ್ಚುತ್ತಾ ಸೂಸು ಮಾಡೋದಕ್ಕೆ ಹಿತ್ತಲಿಗೆ ಹೋಗುತ್ತಿದ್ದೆ.ಮನೆಯಿಂದ ಫರ್ಲಾಂಗು ದೂರದಲ್ಲಿಯಿದ್ದ ಬೂತಮ್ಮನ ಬೆಟ್ಟ ಶ್ವೇತಾಬರಿಯಾಗಿ ಕಂಗೊಳಿಸುತ್ತಿದ್ದಳು.ಇದನ್ನು ಕಣ್ಣುಂಬಿಕೊಳ್ಳುವುದೇ ನನಗೆ ಸಕತ್ ಋಷಿ ವಿಚಾರವಾಗಿತ್ತು.ಬೆಳಗ್ಗೆನೇ ಮನೆ ಕೆಲಸ ಆರಂಭಿಸುವ ನನ್ನಮ್ಮ ಅಡುಗೆ ಮನೆಯಿಂದ ಇಣುಕಿ ಬೂತಮ್ಮನ ಬೆಟ್ಟದ ನೆತ್ತಿ ಮೇಲೆ ಸೂರ್ಯ ಬಂದಿದ್ದಾನೋ,ಇಲ್ಲವೊ ನೋಡುತ್ತಿದ್ದಳು.
ಶನಿವಾರವಾದರೆ ಮುಗಿತು ಕಥೆ,ತಣ್ಣೀರು ಸ್ನಾನ ಮಾಡಿ,ತುಳಿಸಿ ಪೂಜೆ,ಎಕ್ಕದ ಗಿಡಕ್ಕೆ ಪೂಜೆ ಮಾಡಿ,7ಗಂಟೆಗೆ ಹೊರಡುವ ಕೋಲಾರ ಬಸ್ ಹಿಡಿದು,ಮದಾಪುರ ಸ್ಕೂಲ್ ಹೋಗಬೇಕಿತ್ತು.
ಶನಿವಾರ ಸ್ಕೂಲ್ ಹೋಗುವುದು ಅಂದರೆ,ನನಗಂತೂ ರಣಹಿಂಸೆ.ಅಣ್ಣನ ಹತ್ತಿರ ಇಂಗ್ಲೀಷ್ ಪದ್ಯವನ್ನು ಕನ್ನಡಕ್ಕೆ ಬರೆಸ್ಕೊಂಡು ರಾತ್ರಿಯಲ್ಲಾ
ಕಂಠಪಾಠ ಮಾಡುತ್ತಿದೆ.ಇಂಗ್ಲೀಷ್ ಮೇಷ್ಟ್ರು ನಾರಾಯಣಸ್ವಾಮಿ ಅವರಿಗೆ ಶನಿವಾರದಂದು ಗಂಗಮ್ಮ ದೇವತೆ ಮೈಮೇಲೆ ಬರುತ್ತಿದ್ದಳು.ಇಂಗ್ಲೀಷ್ ಪದ್ಯ ಬರದಿದ್ದವರಿಗೆ ಹುಣಸೇ ಬಾರ್ಲು ಸೇವೆ ನೆನಸುಕ್ಕೊಂಡು ಡಿಸೆಂಬರ್ ಚಳಿಯಲ್ಲಿ ಕಂಬಳಿಯೊಳಗೆ ಸಣ್ಣಕ್ಕೆ ನಡುಗುತ್ತಿದೆ.
ಬೆಳಗ್ಗೆಯೇ ಅಲಸಂದೆ ಕಾಳುಸಾರು,ಹಿಟ್ಟು.ಅನ್ನ ಗಬಗಬನೆ ತಿನ್ನೊ ಹೊತ್ತಿಗೆ 7ಗಂಟೆ ಬಸ್ಸು ಕೆರೆ ಏರಿ ಕೆಳಗೆ ಹಾರನ್ ಮಾಡುತ್ತ ಊರೊಳಗೆ ಬರುವಷ್ಟರಲ್ಲಿ ಜೋಳಿಗೆ ಬಾಗ್ ನೇತ್ಕೊಂಡು
ಬಸ್ ಬಸ್ಚಾಂಡ್್ಗೆ ದೌಡಾಯಿಸುತ್ತಿದೆ.
ಇನ್ನೂ ನನ್ನ ಬಗ್ಗೆ ಅಮ್ಮನ ಗುಣಗಾನ ಕೇರಿಗೆ ಕೇಳಸೋದು.ನಮ್ಮ ಹೈದನು ಬೆಳಗ್ಗನೇ ತಣ್ಣೀರು ಸ್ನಾನ ಮಾಡಿಕೊಂಡು ತುಳಿಸಿ ಪೂಜೆ,ಬೂತಮ್ಮನ ಪೂಜೆ ಮಾಡಿ,
ಸ್ಕೂಲಿಗೆ ಹೊರಟವನೆ ಎಂದು ಓರಿಗೆ ಹೆಂಗಸರೊಂದಿಗೆ ಹರಡುತ್ತಿದ್ದಳು.
ಪಾಪಾ..ನನ್ನಮ್ಮನಿಗೆ ಏನು ಗೊತ್ತು.ಇಂಗ್ಳೀಷ್ ಪಂದ್ಯ ಬರದಿದ್ದಕ್ಕೆ ಈಗೆಲ್ಲಾ ಮಾಡುತ್ತಿದ್ದಾನೆ ಎಂದು.ಸ್ಕೂಲ್ ಬದಲಾಯಿಸಿದ್ದರಿಂದ ಹೊಸ ಸ್ನೇಹಿತರು,ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ನನಗೆ ಕಷ್ಟವೇ ಅಯಿತು.ಐದನೇ ಕ್ಸಾಸ್ ಲೀಡರ್ ಮೋಹನ್ ಫ್ರೆಂಡ್ ಶಿಫ್ ಸಂಪಾದಿಸುವುದು ದೊಡ್ಡ ಸವಾಲು ಆಗಿತ್ತು.ಅವನ ಹಿಂದೆ ಹುಡಗರ ದೊಡ್ಡ ಪಟಾಲಂ ಇರುತ್ತಿತ್ತು.ಇಂಗ್ಳೀಷ್ ಹರಿದು ಕುಡಿದಂತೆ ಆಡ್ತಾಯಿದ್ದ,ಅಮ್ಮ ಕೊಡುತ್ತಿದ್ದ ಪುಡಿಗಾಸಿನಲ್ಲಿ 50 ಪೈಸೆ ಪ್ರತಿ ಶನಿವಾರ ಮೋಹನ್ ಕೊಟ್ಟು,ಮೇಷ್ಟ್ರ ಬೆತ್ತದ ಸೇವೆ ತಪ್ಪಿಸಿಕೊಳ್ಳುತ್ತಿದೆ.ಸಾರ್ ಇವನಿಗೂ ಇಂಗ್ಲೀಷ್ ಪದ್ಯ ಬರುತ್ತೆ ಎಂದು ಮೋಹನ್ ದೊಡ್ಡ ಗಂಟಲಲ್ಲಿ ಹೇಳುತ್ತಿದ್ದ.
ಹೀಗೆ ಸಾಗಿತ್ತು ನನ್ನ ಶನಿವಾರದ ದಿನಚರಿ…….ಮೋಹನ್ ಸಖತ್ ಕ್ಸೋಸ್ ಆಗ್ಬಿಟ್ಟ.ನನ್ನ ಜೋಳಿಗೆ ಬಾಗ್ ನಲ್ಲಿ ಇರುತ್ತಿದ್ದ ಚಾಕೊಲೇಟ್,ಚಕ್ಕುಲಿ,ಪಪ್ಪರಮೆಂಟ್ ರುಚಿ ಅವನಿಗೂ ಹತ್ತಿಸಿದೆ.ಸುಡುಗಾಡು ಊರಲ್ಲಿ ಅಂಗಡಿಗಳೇ ಇರಲಿಲ್ಲ.ಹುಣಸೇ ಮರಗಳ ತೋಪಿನ ಮಧ್ಯೆ ಇದ್ದ ಮಾದಪುರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ,ಮೂರು ಜೋಡಿದಾರರ ಕುಟುಂಬಗಳು,ಕೆರೆ ಈ ಊರಿನ ಹೈಲೆಟ್ಸ್ ಎಂದು ಹೇಳಬಹುದು.
ಆದರೆ,ಮಾವಿನ ಕಾಯಿ,ಸಿಬೇಕಾಯಿ,ಕಾರೇಹಣ್ಣು ಅಯಾ ಕಾಲಮಾನದಲ್ಲಿ ಹೊಟ್ಟೆ ತುಂಬಿಸುತ್ತಿದ್ದವು.ಪಕ್ಕದ ಕರಡಿಗುರ್ತಿ,ಹುಲಿಗುಟ್ಟೆ,ಲಕ್ಷ್ನೀಸಾಗರಕ್ಕೆ ಆಗಸ್ಟ 15ರ ಸ್ವಾತಂತ್ರ್ಯ ದಿನದಂದು ಶಾಲಾ ಮಕ್ಕಳನ್ನು ಮೇಷ್ಟ್ರುಗಳು ಕರೆದೊಯ್ಯುತ್ತಿದ್ದರು.ಕಿರಿದಾದ ಬೆಟ್ಟಗುಡ್ಡಗಳ ನಡುವೆ ಇರುವ ಈ ಕುಗ್ರಾಮಗಳಿಗೆ ನಡೆದು,ಘೋಷಣೆ ಹಾಕಿ ಸಾಗುತ್ತಿದ್ದ ನಮಗೆ ಹೊಸ ಪುಳಕ ಹುಟ್ಟಿಸುತ್ತಿತ್ತು.ಆ ಊರಗಳಿಂದ ಬರುತ್ತಿದ್ದ ಗೆಳೆಯರ ಮನೆಗಳಲ್ಲಿ ಮಜ್ಜಿಗೆ,ಕಾಡು ಸೀತಾಫಲ ತಿನ್ನೋದು ಸಖತ್ ಮಜಾವಾಗಿರುತ್ತಿತ್ತು.
ಅಂಗೂ ಹೀಂಗೂ ಐದು ಪಾಸ್ ಆಗಿ ಆರನೇ ಕ್ಲಾಸಿಗ್ ಕಾಲಿಟ್ಟಿದೆ.ಅಷ್ಟೊತ್ತಿಗೆ ನಾನು ಸುಮಾರಾಗಿ ಓದೋ ಹುಡಗರ ಸಾಲಿಗೆ ಸೇರಿದ್ದೆ.ಮ್ಯಾಥ್ ಟೀಚರ್ ರಾಮಚಂದ್ರಗೌಡ,ಸಾವ್ರಕಾರ್ ಸೇಠು ಎಂಬ ಕಿರುನಾಟಕ ಮಾಡಿಸಿದರೂ ನಾನು ಸೇಠ್ ಪಾತ್ರ ಅಭಿನಯಿಸಿದೆ.ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ ಮಾತು ಆಗ್ಬಿಟ್ಟೆ.ಅದೇ,ಗುಂಗಿನಲ್ಲೇ ಆರು ಪಾಸು ಆಗಿ,ಏಳನೇ ಕ್ಸಾಸು ಮುಗಿಸಿ.ಎಂಟನೇ ತರಗತಿಗೆ ಪಕ್ಕದ ಊರಿಗೆ ಸೇರಿದ್ದೆ.ನನ್ನ ಮೊದಲಿನ ದಿನಚರಗಳು ಬದಲಾಗಿದ್ದವು.ಬೂತಮ್ಮನ ಬೆಟ್ಟಕ್ಕೆ ಜೆಲ್ಲಿ ಕ್ರೆಷರ್ ಬಂದು,ವಾತಾವರಣ ಹದೆಗೆಟ್ಟಿತ್ತು.ಮೊದಲಿನ ಹಾಗೆ ಬೂತಮ್ಮನ ಬೆಟ್ಟದ ಮೇಲೆ ಮಂಜು ಕವಿಯುತ್ತಿರಲಿಲ್ಲ.ತುಳಿಸಿ ಪೊಜೆ ಇರಲಿಲ್ಲ.ಇಂಗ್ಲೀಷ್ ಪದ್ಯದ ಕಂಠಪಾಠಕ್ಕಾಗಿ ತಡಕಾಡುತ್ತಿರಲಿಲ್ಲ.ಹೀಗೆ,ನೆನಪುಗಳು,ಬದುಕಿನ ಮಜಲುಗಳ ಬಗ್ಗೆ ಗೆಳಯನಿಗೆ ಹೇಳುತ್ತಲೇ ಇದ್ದೆ.ಕಣ್ಣ್ ಬಿಟ್ಟು ನೋಡಿದರೆ ಬೆಳಗಿನ ಕನಸು.ಮಾರ್ಜಿಂಗ್ ಶಿಷ್ಟ್ ಗೆ ಟೈಮ ಆಗಿತ್ತು.ತಡಬಡಾಯಿಸುತ್ತಾ ಅಫೀಸ್ಸಿಗೆ ಹೊರಟು ಬಂದೆ.
6 Comments
May 18, 2008 at 9:06 am
ಸುಬ್ಬಣ್ಣ ನಿಮ್ಮ ಕತ್ತೆ ಚನ್ನಾಗಿದೆ.
May 19, 2008 at 2:27 am
Nice kano, haage naanu kooda Boothammana Betta, maadhapura, nodibanda haagayitu. ninna nenapugala nadi(river) heege saagali, a Nenapugala Nadiyalli swim maaduva bhaagya nammadaagali.
May 19, 2008 at 2:34 am
ಸುಬ್ರಮಣಿ ಅವರೇ ನಿಮ್ಮ ಅನುಭವದ ಸಾಲುಗಳು ನಿಮ್ಮಲ್ಲಿನ ಹೊಸ ಕಥೆಗಾರನ ಸಾಮರ್ಥ್ಯವನ್ನು ಹುಟ್ಟುಹಾಕಿವೆ. ಆದರೆ ನಿಮ್ಮ ಬರವಣಿಗೆಯ ಮೇಲೆ ಬೇರೆಯವರ ಪ್ರಭಾವ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದರಿಂದ ಹೊರ ಬಂದರೆ ಒಳ್ಳೆಯದು. ಮಧ್ಯಮ ವರ್ಗದವರ ತೆವಲು, ತಿಕ್ಕಲುತನ ಮತ್ತು ಅಡಬಿಡಂಗಿ ನಿಲುವುಗಳು ನಿಮಗೆ ವಕ್ಕರಿಸದಿರಲಿ. ನಿಮ್ಮ ಭೂತಮ್ಮನಬೆಟ್ಟದ ಸಾಲುಗಳಲ್ಲಿ ದಟ್ಟವಾದ ಅನುಭವಗಳು ಕಾಣೆಯಾಗಿವೆ. ಆದರಿಂದಲೇ ನಿಮ್ಮ ಬರಹದಲ್ಲಿ ಅಲ್ಲಲ್ಲಿ ಜಾಳು ತನವಿದೆ. ಇದಕ್ಕೆ ಬೇರೆಯವರ ಪ್ರಭಾವ ಮತ್ತು ನಿಜವನ್ನು ಮರೆ ಮಾಚುವ ಯತ್ನವೂ ಇರಬಹುದೆಂದು ಅನಿಸುತ್ತದೆ. ನೆಲಮೂಲ ಸಂಸ್ಕೃತಿಯ ಅನುಭವ ಯಾವತ್ತೂ ಅಳ್ಳಕವಾಗಿರದು. ಆದ್ದರಿಂದ ದನಿ ಇಲ್ಲದವರ, ಸೂರಿಲ್ಲದವರ, ಶ್ರಮಿಕ ಸಂಸ್ಕೃತಿಯತ್ತ ನಿಮ್ಮ ಬರವಣಿಗೆ ಮುಖ ಮಾಡಲಿ. ಬೇರೆಯವರನ್ನು ಮೆಚ್ಚಿಸಲು ಬರೆದರೆ ಅದು ತನಗೆ ತಾನೇ ಮಾಡಿಕೊಂಡ ದ್ರೋಹವಾಗುತ್ತದೆ.
- ಗುಡ್ಡದಯ್ಯ
May 24, 2008 at 5:16 pm
blogmaadi haalagi hogi
office kelasa yavaga madteera?
May 24, 2008 at 5:17 pm
sakhigeeta eshtaneyadu?
May 24, 2008 at 5:20 pm
subbanna
chennaagi bardideeya
keep it up
blog hesaru koodaa chennaagide
pratee dina ondu lekhanavaadaroo baredare olleyadu.
Leave a Reply